1957ರಲ್ಲಿ ದಿವಂಗತ ಡಾ. ಕೆ. ಹನುಮಂತ ಮಲ್ಯರು ಸ್ಥಾಪಿಸಿದ ಪುತ್ತೂರು ಶ್ರೀ ದೇವತಾ ಸಮಿತಿ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ಸುವರ್ಣ ಮಹೋತ್ಸವದ ಆಚರಣೆಯ ಸಿದ್ಧತೆಯಲ್ಲಿರುವುದು ಸಂತಸದ ವಿಚಾರ. ಅಂದು ಪರಿಸರದ ಆಪ್ತರೊಂದಿಗೆ ದಿ. ಹನುಮಂತ ಮಲ್ಯರಿಂದ ಸ್ಥಾಪನೆಗೊಂಡ ಧಾರ್ಮಿಕ ಸಂಘಟನೆ ತನ್ನ ಐದು ದಶಕಗಳ ಸುದೀರ್ಘ ಇತಿಹಾಸದಲ್ಲಿ ಬೆಳೆದು ಇಂದು ಹೆಮ್ಮರವಾಯಿತು.
ದಿ. ಮಲ್ಯರ ಮೂಲ ಆಶಯಗಳಿಗೆ ಚ್ಯುತಿ ತಾರದೆ ಉತ್ಸವವನ್ನು ನಡೆಸಿಕೊಂಡು ಸಮಿತಿಯ ಸದಸ್ಯರು ಬಂದಿರುತ್ತಾರೆ. ಪ್ರಾರಂಭದ ನಾಲ್ಕು ವರ್ಷ ಗಣೇಶೋತ್ಸವವು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದು ಬಂದಿತ್ತು. ನಂತರ ಭಕ್ತರ ಅನುಕೂಲಕ್ಕಾಗಿ ಕೋರ್ಟು ಕಿಲ್ಲೆ ಮೈದಾನಕ್ಕೆ ವರ್ಗಾಯಿಸಲಾಯಿತು. ಐವತ್ತರ ಸಂಭ್ರಮವನ್ನು ಅರ್ಥಪೂರ್ಣವಾಗಿಸಬೇಕೆಂಬ ನೆಲೆಯಲ್ಲಿ ಹತ್ತು ಹಲವು ವೈವಿಧ್ಯಮಯ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 11 ದಿನಗಳ ಕಾಲವೂ ದಿನನಿತ್ಯ ದೇವರ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಈ ಬಾರಿ ಗಣಪತಿಗೆ ನಡೆಯುವ ಸೇವೆಗಳಲ್ಲಿ ಬಹಳ ಫಲಪ್ರದಾಯಕ ಸೇವೆ ಮೂಡಪ್ಪ ಸೇವೆ ಕೂಡಾ ನಡೆಯಲಿದೆ.
ಈ ಮಹಾಗಣಪತಿಗೆ ಉತ್ಸವದ ರಜತ ಮಹೋತ್ಸವ ಮತ್ತು ಸ್ವರ್ಣ ಮಹೋತ್ಸವ ಎರಡೂ ಸಂದರ್ಭಗಳಲ್ಲಿ ಶ್ರೀ ದೇವತಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಅವಕಾಶ ಎನ್. ಸುಧಾಕರ ಶೆಟ್ಟಿಯವರಿಗೆ ಒದಗಿ ಬಂದಿರುವುದು ಒಂದು ಯೋಗವೇ ಅನ್ನಬೇಕು.
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಭಕ್ತಾದಿಗಳು ಒಂದುಗೂಡಿ ಇನ್ನೂ ಗಟ್ಟಿಯಾಗಿ ಅರ್ಥಪೂರ್ಣವಾಗಿ ಆಚರಣೆಯಾಗುವಂತಾಗಲಿ ಅನ್ನುವುದೇ ನಮ್ಮ ಆಶಯ. ಅಂದಿನ ಗಣಪ ಇಂದಿನ ಸ್ವರ್ಣ ಗಣಪ.
ದಿ| ಯನ್. ಪ್ರಭಾಕರ ಶೆಟ್ಟಿ
ಉಪಾಧ್ಯಕ್ಷರು
ದೇವತಾ ಸಮಿತಿ, ಪುತ್ತೂರು
Leave a Reply