ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಉತ್ಸವದ ಅವಿಭಾಜ್ಯ ಅಂಗವಾಗಿದ್ದು, ನಾವು ಈ ವೇದಿಕೆಯ ಮೇಲೆ ಪರಂಪರೆಯ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ. ಇಲ್ಲಿ ಭಜನೆ, ಯಕ್ಷಗಾನ ಬಯಲಾಟ, ಭರತನಾಟ್ಯ, ಜನಪದ ನೃತ್ಯ, ಮಾಯೆ ಪ್ರದರ್ಶನ, ಕನ್ನಡ-ತುಳು ನಾಟಕ, ಸ್ಯಾಕ್ರೋಫೋನ್ ವಾದನ, ಶಾಸ್ತ್ರೀಯ ಮತ್ತು ಸುಗಮ ಸಂಗೀತ, ಭಕ್ತಿ ಸಂಗೀತ, ಹರಿಕಥೆ ಮುಂತಾದ ವಿವಿಧ ಕಾರ್ಯಕ್ರಮಗಳು ಪ್ರದರ್ಶಿಸಲಾಗುತ್ತವೆ.