Puttur Ganapathi

“ಸುಧಾಕರ ಶೆಟ್ಟಿ”ಎಂಬ ಅಜಾತಶತ್ರು
ಶಿಕ್ಷಣ ಕಲೆ ಸಾಹಿತ್ಯ ಕ್ರೀಡೆ ಸಮಾಜ ಸೇವೆಯೆಂಬ ನೆಲೆಗಳಲ್ಲಿ ಗುರುತಿಸಿಕೊಂಡ  ಎನ್.ಸುಧಾಕರ ಶೆಟ್ಟಿ ಕಳೆದ ವರ್ಷ ಅಕ್ಟೋಬರ್ 11/2023ಸೋಮವಾರ ಭೌತಿಕ ದೇಹದಿಂದ ದೂರವಾಗಿ ನೆನಪಾಗಿ ಉಳಿದು ಹೋದರು.ಸದಾ ನಗುಮುಖ ಸಜ್ಜನ ಶೀಲ ವ್ಯಕ್ತಿ

ಶ್ರೀ.ಎನ್.ಸುಧಾಕರ ಶೆಟ್ಟಿ ಸಜ್ಜನ ರಾಜಕಾರಣಿ..ಅಜಾತ ಶತ್ರು.ಸಾರ್ವಜನಿಕ ಗಣೇಶೋತ್ಸವ ಎಂದಾಗ ಕಿಲ್ಲೆ ಮೈದಾನ, ದೇವತಾ ಸಮಿತಿ ನೆನಪಿಗೆ ಬಾರದಿರದು. ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತ.. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ನೆಲೆಯಲ್ಲಿ.. ಸೇವಾ ರೂಪದಲ್ಲಿ ಅನೇಕ ಕೆಲಸ ಕಾರ್ಯ ನೆರವೇರಿಸಿದ ದೇವತಾ ಮನುಷ್ಯ. ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಸಂಚಾಲಕರಾಗಿ ಅವರು ವೇದಿಕೆಯಲ್ಲಿರುವಾಗ ಏನೋ ಸಂಚಲನ.

ನೆಲ್ಲಿಕಟ್ಟೆ ನಿವಾಸಿ ಎನ್.ಸುಧಾಕರ ಶೆಟ್ಟಿ 80ವರ್ಷ ಬಾಳಿ ಬೆಳಗಿದರು. 44ವರ್ಷಗಳಿಂದ ಪುತ್ತೂರು ದೇವತಾ ಸಮಿತಿಯ ಅಧ್ಯಕ್ಷರಾಗಿ ಕಿಲ್ಲೆ ಮೈದಾನದ ಸಾರ್ವಜನಿಕ ಗಣೇಶೋತ್ಸವಕೆ ಭಕ್ತಿಯ ರೂಪ ಕೊಟ್ಟವರು. ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮದ ಬೆಳಕನ್ನು ಹರಡಿದ ಪೂಜ್ಯರು ಸ್ಥಾಪಕರಾಗಿದ್ದ ಡಾ.ದಿ. ಕೆ.ಹನುಮಂತ ಮಲ್ಯ ಅವರ ಕನಸುಗಳಿಗೆ ಸುಂದರ ರೂಪಕೊಟ್ಟು ನಡೆಸಿದವರವರು.

ಪತ್ನಿ ಶ್ರೀಮತಿ ಗೀತಾ ಸುಧಾಕರ್ ಮತ್ತು ಪುತ್ರರಾಗಿರುವ ಅಭಿಷೇಕ್, ಅಭಿಜಿತ್ ಇವರಿಗೆ ಸಂಸ್ಕೃತಿ ಸಾಮರಸ್ಯದ ಅರಿವು ನೀಡಿ ಅವರು ಸಮಾಜ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಪತಿ ಮತ್ತು ಆದರ್ಶ ಪಿತರು.

ಪ್ರಕೃತ ಇವರ ಕಿರಿಯ ಪುತ್ರ ಅಭಿಜಿತ್ ಶೆಟ್ಟಿ ಎಸ್.B.E.ಪುತ್ತೂರಿನಲ್ಲೇ ಇದ್ದು ತನ್ನ ತಂದೆಯವರು ಪೂರ್ವಾಧ್ಯಕ್ಷರಾಗಿ ನಡೆಸುತ್ತಿದ್ದ , ಕಿಲ್ಲೆ ಮೈದಾನದ 67ನೇ ವರ್ಷದ, ಗಣೇಶೋತ್ಸವ ಸಮಿತಿಯ ಯುವ ಅಧ್ಯಕ್ಷರಾಗಿ ದೇವತಾನುಗ್ರಹದೊಂದಿಗೆ, ಸಮಿತಿಯ ಎಲ್ಲಾ ಹಿರಿಯರ ಸಲಹೆಯೊಂದಿಗೆ ತಮ್ಮ ತಂದೆಯವರ ಕನಸಿಗೆ ಸುಂದರ ರೂಪ ಕೊಡಲು ಮುಂದಾಗಿರುವರು. ಸೆ.13 ಶುಕ್ರವಾರದವರೆಗೆ ಗಣೇಶೋತ್ಸವ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಯಶಸ್ವಿಯಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಂಗವಾಗಿ ನೆರವೇರಲೆಂದು ಶುಭಹಾರೈಸೋಣ.

ನಾರಾಯಣ ರೈ ಕುಕ್ಕುವಳ್ಳಿ

10 Sep 2024

The post “ಸುಧಾಕರ ಶೆಟ್ಟಿ”ಎಂಬ ಅಜಾತಶತ್ರು first appeared on Puttur Ganapathi.

ಶ್ರೀ ಗಣೇಶೋತ್ಸವ : ನಡೆದು ಬಂದ ದಾರಿ – ಪ್ರೊ. ವಿ. ಬಿ. ಅರ್ತಿಕಜೆ
ಶ್ರೀ ಗಣೇಶೋತ್ಸವ : ನಡೆದು ಬಂದ ದಾರಿ

ಜಗನ್ಮಾತೆಯಾದ ಪಾರ್ವತೀ ದೇವಿ ವಿನೋದಕ್ಕೆಂದು ಸಣ್ಣ ಬಾಲಕನ ಮೂರ್ತಿಯನ್ನು ರೂಪಿಸಿದಾಗ ಈತನೇ ಜಗದ್ವಂದ್ಯನಾಗಿ ಮೊದಲ ಪೂಜೆಗೆ ಅರ್ಹನಾಗುವ ಗಣಪತಿಯೆನಿಸುವನೆಂದು ಕನಸು ಕಂಡಿರಲಿಕ್ಕಿಲ್ಲ. ಆದರೆ ದಿನಗಳೆದಂತೆ ಅವನ ಸ್ವರೂಪದೊಂದಿಗೆ ಹಕ್ಕು ಹೊಣೆಗಾರಿಕೆಗಳು ಬದಲಾಗಿ ತ್ರಿಮೂರ್ತಿಗಳಿಂದ ಕೂಡ ಗೌರವಿಸಲ್ಪಡುವ ವಿಘ್ನೇಶ್ವರನೇ ಆದ.

ಪುತ್ತೂರಿನಲ್ಲಿ ಮೊದಲ ಬಾರಿಗೆ 1957ರಲ್ಲಿ ಕೆಲವು ಮಂದಿ ಉತ್ಸಾಹೀ ತರುಣರು ಮತ್ತು ಕುತೂಹಲಿಗಳಾದ ಮಕ್ಕಳನ್ನು ಸೇರಿಸಿಕೊಂಡು ಬೋರ್ಡ್ ಪ್ರಾಥಮಿಕ ಶಾಲೆಯ ಜಗಲಿಯಲ್ಲಿ ಶ್ರೀ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ವೈದ್ಯ ಕೆ. ಹನುಮಂತ ಮಲ್ಯರಿಗೆ ಇದೊಂದು ಬೃಹತ್‌ ಪ್ರಮಾಣದಲ್ಲಿ ಬೆಳೆಯುವ ಮಹತ್ತ್ವದ ಘಟನೆಯೆಂದು ಅನ್ನಿಸಿರಲಿಲ್ಲ. ಆದರೆ ಎಲ್ಲ ವಯೋಮಾನದ ಮಹಿಳೆಯರು, ಪುರುಷರು ಜಾತಿ-ಪಂಗಡಗಳ ಭೇದವಿಲ್ಲದೆ ಒಟ್ಟು ಸೇರಬೇಕು. ಗಣಪತಿಯ ಆರಾಧನೆಯಿಂದ ಪುಳಕಿತಗೊಳ್ಳಬೇಕು. ಜತೆಗೆ ಧಾರ್ಮಿಕ ಆಚರಣೆಗಳಿಗೆ ಪೂರಕವಾಗಿ ಸಾಮಾಜಿಕ ಸೇವಾ ಕಾರ್ಯಗಳು ಮತ್ತು ಸಾಂಸ್ಕೃತಿಕ ಕಲಾಪಗಳು ನೆರವೇರಬೇಕು ಎನ್ನುವ ಉದ್ದೇಶ ಅವರದಾಗಿತ್ತು.

ಮೊದಲ ವರ್ಷ ಸಣ್ಣ ರೀತಿಯಲ್ಲಿ ಉತ್ಸವ ಪ್ರಾರಂಭವಾಯಿತು. ಸೇರಿದವರಲ್ಲಿ ಹೆಚ್ಚಿನವರು ಮಕ್ಕಳೇ ಆದ್ದರಿಂದ ಜನ ಈ ಗಣೇಶನನ್ನು ಮಕ್ಕಳ ಗಣಪತಿ ಎಂದು ಕರೆದರು. ರಾಮಕೃಷ್ಣ ಭಟ್ಟ ಎಂಬವರು ತಯಾರಿಸಿದ ವಿಗ್ರಹವನ್ನು ಮಹಾಪೂಜೆಯ ನಂತರ ಲಾರಿಯೊಂದರ ಕ್ಯಾಬಿನ್ ಮೇಲೆ ಇರಿಸಿ ಪೇಟೆಯಲ್ಲಿ ಮೆರವಣಿಗೆ ಮಾಡಲಾಯಿತು. ಕೊನೆಗೆ ನೆಹರುನಗರದ ಸರೋವರದಲ್ಲಿ ವಿಸರ್ಜಿಸಲಾಯಿತು. ಹನುಮಂತ ಮಲ್ಯರು ಈ ಸರೋವರಕ್ಕೆ ಶ್ವೇತ ಸರೋವರ ಎಂಬ ಹೆಸರನ್ನಿತ್ತರು:

ಸ್ಥಾಪಕರ ನೆನಪು

ಪುತ್ತೂರಿನಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸುವ ಸಂಪ್ರದಾಯದ ರೂವಾರಿಯಾದವರು ಕೆ. ಹನುಮಂತ ಮಲ್ಯರು. ವೃತ್ತಿಯಿಂದ ಇವರೊಬ್ಬ ವೈದ್ಯರು. ಬಡಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಜನಪ್ರಿಯರಾಗಿದ್ದ ಅವರು ಶಿಸ್ತು, ಶ್ರದ್ಧೆ ಹಾಗೂ ನಿಷ್ಠೆಗಳಿಗೆ ಹೆಸರಾದವರು. ಜತೆಗೆ ಹಿಡಿದ ಕೆಲಸವನ್ನು ಕಷ್ಟ ನಷ್ಟಗಳ ನಡುವೆಯೂ ಗುರಿ ಮುಟ್ಟಿಸುವ ಛಲ ಅವರಲ್ಲಿತ್ತು.

ಜನಸೇವೆ ಮತ್ತು ಜನಾರ್ದನ ಸೇವೆ ಎರಡರಲ್ಲೂ ಅವರಿಗೆ ಆಸಕ್ತಿಯಿತ್ತು. ಆದ್ದರಿಂದಲೇ ಅವರು ಪುತ್ತೂರಿನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಾಲಿಂಗೇಶ್ವರ ದೇವಾಲಯದ ಎದುರಿನ ಕಂಬಳ ಗದ್ದೆಯು ತಮ್ಮ ಸ್ವಾಧೀನವಿದ್ದಾಗ ನಿಂತು ಹೋಗಿದ್ದ ಕಂಬಳ ಕ್ರೀಡೆಯನ್ನು ಒಮ್ಮೆ ನಡೆಸಿದ್ದರು.

ಅಲ್ಲದೆ ದೇವಳದ ರಥಬೀದಿಯನ್ನು ನಿರ್ಮಿಸಿಕೊಡಬೇಕೆಂದು ಬಯಸಿದ್ದರು. ಅವರ ಇಚ್ಛೆಯಂತೆ ಅವರ ನಿಧನಾನಂತರ ಪತ್ನಿ ವತ್ಸಲಾ ಮಲ್ಕರು ದೇವಾಲಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದರು.

ಗಣೇಶೋತ್ಸವವನ್ನು ತಾವೇ ಪ್ರಾರಂಭಿಸಿದ ಮಲ್ಯರು ಊರಿನ ಹಲವರು ಗಣ್ಯರನ್ನು ಸಮಿತಿಯಲ್ಲಿ ಸೇರಿಸಿಕೊಂಡು ಕಲಾಪಗಳನ್ನು ಯಶಸ್ವಿಯಾಗಿ ನೆರವೇರಿಸುತ್ತಾ ಬಂದರು. ಇತರರನ್ನು ಮುಂದಿಟ್ಟುಕೊಂಡು ಕೇವಲ ಕಾರ್ಯಕರ್ತನಾಗಿ, ಸೇವಕನಾಗಿ ದುಡಿಯುವುದು ಅವರ ವಿನಯಶೀಲತೆಗೆ ಸಾಕ್ಷಿ. ಎಲ್ಲಿಯ ತನಕ ಇಲ್ಲಿ ಗಣೇಶನ ಹಬ್ಬ ನಡೆಯುತ್ತದೆಯೋ ಅಲ್ಲಿಯವರೆಗೆ ಹನುಮಂತ ಮಲ್ಯರನ್ನು ಮರೆಯುವುದು ಅಸಾಧ್ಯ.

ಹಬ್ಬಿದ ಹಬ್ಬ :

ಗಣೇಶೋತ್ಸವವು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದಿದ್ದು ಕೇವಲ ನಾಲ್ಕು ವರ್ಷ. ಬಳಿಕ ಸಾರ್ವಜನಿಕರ ಮತ್ತು ಭಕ್ತರ ಅನುಕೂಲಕ್ಕಾಗಿ ಕೋರ್ಟ್ (ಕಿಲ್ಲೆ) ಮೈದಾನಕ್ಕೆ ವರ್ಗಾಯಿಸಲಾಯಿತು. ಅಲ್ಲಿ ವಿಶಾಲವಾದ ಚಪ್ಪರ ಹಾಕಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಯಿತು. ಉತ್ಸವದ ಅವಧಿಯನ್ನು ಏಳು ದಿವಸಗಳಿಗೆ ವಿಸ್ತರಿಸಿದ್ದರಿಂದ ಒಂದು ವಾರದ ಕಾಲ ಸಹಸ್ರಾರು ಮಂದಿಗೆ ಅದರಲ್ಲಿ ಭಾಗವಹಿಸುವ ಅನುಕೂಲತೆ ದೊರೆಯಿತು.

ವಿಶ್ವಂಭರ ಮೂರ್ತಿಯ ಜತೆಗೆ ಅಷ್ಟಸಿದ್ದಿ ವಿನಾಯಕನ ಸಣ್ಣ ವಿಗ್ರಹ ಇರುವುದು ಇಲ್ಲಿನ ವಿಶೇಷವಾಗಿದ್ದು ಕಷ್ಟ ನಿವಾರಣೆ ಮತ್ತು ಇಷ್ಟಪೂರ್ತಿಗಾಗಿ ಹಲವಾರು ಮಂದಿ ಗಣೇಶನಿಗೆ ಹರಕೆ ಹೊರುತ್ತಾರೆ. ಚಿನ್ನದ ಹಾಗೂ ಬೆಳ್ಳಿಯ ಇಲಿ, ಬೆಳ್ಳಿಯ ಗರಿಕೆ, ಘಂಟೆ, ಚಿನ್ನದ ನಾಣ್ಯ ಹಾಗೂ ನೈವೇದ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಜನ ಭಕ್ತಿಯಿಂದ ತಂದೊಪ್ಪಿಸುತ್ತಾರೆ. ತಮಗೆ ಮಾನಸಿಕ ನೆಮ್ಮದಿ, ಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ದಿ ಆಗಿರುವುದಾಗಿ ಹಲವರು ಹೇಳುತ್ತಿದ್ದಾರೆ.

ಪೂಜೆ, ಹಣ್ಣು ಕಾಯಿ, ಮಂಗಳಾರತಿಗಳ ಜತೆಗೆ ಗಣಪತಿ ಹೋಮ, ರಂಗಪೂಜೆ, ತುಲಾಭಾರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಉತ್ಸವದ ದಿನಗಳಲ್ಲಿ ಜರಗುತ್ತವೆ. ಪ್ರಾರಂಭದಲ್ಲಿ ಇಪ್ಪತ್ತೊಂದು ಕಿಲೋ ಅಕ್ಕಿಯ ನೈವೇದ್ಯವನ್ನು ದೇವರಿಗೆ ಅರ್ಪಿಸಿ ಅದನ್ನು ಭಕ್ತರಿಗೆ ಹಂಚಲಾಗುತ್ತಿತ್ತು. ಕ್ರಮೇಣ ಪ್ರಸಾದ ಭೋಜನಕ್ಕೆ ಬರುವವರ ಮತ್ತು ಅದಕ್ಕಾಗಿ ಅಕ್ಕಿ-ದವಸಗಳು, ತೆಂಗಿನಕಾಯಿ, ತರಕಾರಿ ಮುಂತಾದುವುಗಳನ್ನು ಕೊಡುವವರ ಸಂಖ್ಯೆ ಹೆಚ್ಚಿದ್ದರಿಂದ ಪ್ರತಿದಿನವೂ ಅನ್ನ ಸಂತರ್ಪಣೆ ಏರ್ಪಡುತ್ತಿದೆ. ಸಾವಿರಾರು ಮಂದಿ ಭಕ್ತರು ಇದರಲ್ಲಿ ಭಾಗವಹಿಸುತ್ತಾರೆ. ಆಗೊಮ್ಮೆ ಈಗೊಮ್ಮೆ ದಾನಿಗಳು ಅಪೇಕ್ಷೆ ಪಟ್ಟಾಗ ಬಡವರಿಗೆ ದವಸಧಾನ್ಯ, ಬಟ್ಟೆಬರೆಗಳನ್ನು ವಿತರಿಸುವ ಕ್ರಮವೂ ಇದೆ.

ಸಾಂಸ್ಕೃತಿಕ ಕಲಾಪಗಳು :

ಬರಬರುತ್ತಾ ವೈವಿಧ್ಯಮಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಕಲಾಪಗಳು ಹೆಚ್ಚತೊಡಗಿದುವು. ಉತ್ಸವವು ಮೂರೋ ಐದೋ ದಿನಗಳಿದ್ದಾಗ ಇವುಗಳಿಗೆ ಸಾಕಷ್ಟು ಎಡೆ ಸಿಕ್ಕುತ್ತಿರಲಿಲ್ಲ. ಸಪ್ತಾಹದ ಕಾಲ ನಡೆಯತೊಡಗಿದಾಗ ಕಲಾಪಗಳ ಸಂಖ್ಯೆ ಹಾಗೂ ವೈವಿಧ್ಯ ಅಧಿಕಗೊಂಡವು.

ಧಾರ್ಮಿಕ ವಿಷಯಗಳ ಕುರಿತು ಪರಿಣತರಿಂದ, ಸ್ವಾಮಿಗಳಿಂದ ಭಾಷಣ. ವಿದ್ವಾಂಸರಿಂದ, ಸಾಹಿತಿಗಳಿಂದ ಉಪನ್ಯಾಸ ಮುಂತಾದ ಕಲಾಪಗಳು ನೆರವೇರುತ್ತಿದ್ದು ವಿವಿಧ ರಂಗಗಳಲ್ಲಿ ದುಡಿಯುವ ಹಿರಿಯರನ್ನು ಅತಿಥಿ-ಅಭ್ಯಾಗತರಾಗಿ ಆಹ್ವಾನಿಸಲಾಗುತ್ತಿದೆ. ಪ್ರತಿಭಾವಂತರಾದ ಎಳೆಯರು, ಯುವಜನರು ಮತ್ತು ಹಿರಿಯರನ್ನು ಸಂದರ್ಭೋಚಿತವಾಗಿ ಸನ್ಮಾನಿಸಲಾಗುತ್ತಿದೆ.

ಉತ್ಸವದ ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಜನರನ್ನು ಆಕರ್ಷಿಸುತ್ತಿವೆ. ಭಜನೆ, ಯಕ್ಷಗಾನ ಬಯಲಾಟ, ಭರತನಾಟ್ಯ, ಜನಪದ ನೃತ್ಯ, ಚಾದೂ ಪ್ರದರ್ಶನ, ಕನ್ನಡ-ತುಳು ನಾಟಕ, ಸ್ಯಾಕ್ರೋಫೋನ್ ವಾದನ, ಶಾಸ್ತ್ರೀಯ ಮತ್ತು ಸುಗಮ ಸಂಗೀತ, ಭಕ್ತಿ ರಸಮಂಜರಿ, ಹರಿಕಥೆ ಮುಂತಾದುವು ಜನಾಕರ್ಷಣೆಗೆ ಸಹಕಾರಿಯಾಗಿವೆ. ಸಾಯಂಕಾಲ ಮಾತ್ರವಲ್ಲದೆ ಬೆಳಗ್ಗಿನ ಹೊತ್ತಿನಲ್ಲೂ ಕಲಾ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತಿದೆ.

ಇಂತಹ ಕಲಾಪಗಳನ್ನು ಏರ್ಪಡಿಸುವಾಗ ಈಗಾಗಲೇ ಹೆಸರು ಮಾಡಿದ ಹಿರಿಯರ ಕಲಾವಿದರ ಜತೆಗೆ ಉದಯೋನ್ಮುಖ ಪ್ರತಿಭಾಶಾಲಿಗಳನ್ನು, ಪರವೂರಿನ ಪ್ರಸಿದ್ದರೊಂದಿಗೆ ಊರಿನ ಪರಿಚಿತರನ್ನು ವೇದಿಕೆಗೆ ಆಮಂತ್ರಿಸಲಾಗುತ್ತಿದೆ. ಇದರಿಂದಾಗಿ ನೂರಾರು ಮಂದಿ ಕಲಾವಿದರಿಗೆ ತಮ್ಮ ಪ್ರತಿಭಾಪ್ರದರ್ಶನಕ್ಕೆ ಅವಕಾಶ ಸಿಗುತ್ತಿದೆ.

ಶೋಭಾಯಾತ್ರೆ :

ಕೊನೆಯ ದಿನದ ಶೋಭಾಯಾತ್ರೆಯಂತೂ ತುಂಬ ಅದ್ದೂರಿಯಿಂದ ಜರಗುತ್ತಿದೆ. ಅತ್ಯಾಕರ್ಷಕ ಸ್ತಬ್ಧ ಚಿತ್ರಗಳು, ಗೊಂಬೆ ಮತ್ತಿತರ ಕುಣಿತಗಳು, ವಾದ್ಯವೃಂದ ಹಾಗೂ ಸುಡುಮದ್ದು ಪ್ರದರ್ಶನಗಳಿಂದಾಗಿ ಯಾತ್ರೆಯು ಜನರ ಗಮನವನ್ನು ಸೆಳೆಯುತ್ತದೆ. ಪಟ್ಟಣದ ಹೆಚ್ಚಿನ ಭಾಗಗಳಲ್ಲಿ ಶೋಭಾ ಯಾತ್ರೆಯು ಸಂಚರಿಸುವುದರಿಂದ ಆಸಕ್ತರು ರಾತ್ರಿಯ ಹೊತ್ತು ವಿದ್ಯುದ್ದೀಪದ ಬೆಳಕಿನಲ್ಲಿ ಇದರ ವರ್ಣ ವೈಖರಿಯನ್ನು ನೋಡಲು ಅವಕಾಶವಿದೆ.

ಕಿಲ್ಲೆ ಮೈದಾನದಿಂದ ಹೊರಡುವ ಮೆರವಣಿಗೆಯು ಪ್ರಧಾನ ರಸ್ತೆಯ ಮೂಲಕ ದರ್ಬೆಗೆ ಹೋಗಿ ಅಲ್ಲಿಂದ ಶಿವಪೇಟೆ, ತಾಲೂಕು ಕಛೇರಿ ರಸ್ತೆ, ರಾಧಾಕೃಷ್ಣ ಮಂದಿರ ರಸ್ತೆ, ನ್ಯಾಯಾಲಯ ರಸ್ತೆ, ಮುಖ್ಯ ರಸ್ತೆ, ಬೊಳುವಾರು ಮೂಲಕ ಹಾದು ಮಂಜಲ್‌ಪಡ್ಡು ತನಕ ಸಾಗುತ್ತದೆ. ಶ್ವೇತ ಸರೋವರವು ರೈಲ್ವೇ ನಿರ್ಮಾಣದ ವೇಳೆ ಮುಚ್ಚಿಹೋದದ್ದರಿಂದ ಕೆರೆಯೊಂದರಲ್ಲಿ ಗಣೇಶ ವಿಗ್ರಹದ ಜಲಸ್ತಂಭನ ನೆರವೇರುತ್ತದೆ.

ಶೋಭಾಯಾತ್ರೆಯ ಕಳೆಯನ್ನು ಹೆಚ್ಚಿಸುವ ಸಂಗತಿಯೆಂದರೆ ದೈವಗಳ ಪಾಲ್ಗೊಳ್ಳುವಿಕೆ. ಮುಖ್ಯವಾಗಿ ಎರಡು ದೈವಗಳು ಜನರ ಗಮನ ಸೆಳೆಯುತ್ತವೆ. ರಕೇಶ್ವರಿ ಭೂತವು ಪೂಜಾ ಸ್ಥಳದಲ್ಲಿ ಕಟ್ಟಲ್ಪಟ್ಟು ಜಲಸ್ತಂಭನದ ಕೆರೆಯ ತನಕ ಬರುತ್ತದೆ. ಅಣ್ಣಪ್ಪ ಪಂಜುರ್ಲಿ ಭೂತವು ಕಲ್ಲೇಗದ ದೈವದ ಬನದಿಂದ ಹೊರಟು ವಿಸರ್ಜನ ಸ್ಥಳದ ತನಕ ಬರುವುದು. ಶೋಭಾಯಾತ್ರೆಯ ವೇಳೆ ಕಲ್ಲೇಗದ ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ತಂಬಿಲ ನೆರವೇರುತ್ತದೆ. ಮಾಡಾವಿನ ರಾಮ ಪರವ ಮತ್ತು ಮಕ್ಕಳು ಪಾತ್ರಿಗಳಾಗಿ ಸಹಕರಿಸುತ್ತಿದ್ದಾರೆ.

ಶ್ರೀ ದೇವತಾ ಸಮಿತಿ :

ಶ್ರೀ ಗಣೇಶೋತ್ಸವವು ಪ್ರಾರಂಭದ ಕಾಲಾವಧಿಯಲ್ಲಿ ಹನುಮಂತ ಮಲ್ಯರ ಮಾರ್ಗದರ್ಶನ ಹಾಗೂ ಅನೌಪಚಾರಿಕ ಸಮಿತಿಯೊಂದರ ನೆರವಿನಿಂದ ನೆರವೇರುತ್ತಿತ್ತು. ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಸದಸ್ಯರು ಪುತ್ತೂರು ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿ, ಕಡಬ, ವಿಟ್ಲ, ನೇರಳೆಕಟ್ಟೆ, ಕಲ್ಲಡ್ಕ, ಬಿ. ಸಿ. ರೋಡ್, ಉಪ್ಪಿನಂಗಡಿ ಮುಂತಾದ ಊರುಗಳಿಗೆ ಹೋಗಿ ಭಕ್ತ ಜನರರಿಂದ ಹಣ ಸಂಗ್ರಹಿಸುತ್ತಿದ್ದರು. ಸಂಪನ್ಮೂಲವನ್ನು ಹೊಂದಿಸಿಕೊಳ್ಳುವುದು ಕಷ್ಟವಾದ್ದರಿಂದ ಕನಿಷ್ಠ ಖರ್ಚಿನಲ್ಲಿ ಉತ್ಸವ ಪೂರ್ತಿಗೊಳಿಸುವ ಪ್ರಯತ್ನ ನಡೆದಿತ್ತು.

ಆದರೆ ರಾಜಕೀಯ ಮುಂದಾಳು ಹಾಗೂ ಸಾಮಾಜಿಕ ಕಾರ್ಯಕರ್ತ ಎನ್. ಸುಧಾಕರ ಶೆಟ್ಟಿಯವರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಶ್ರೀ ದೇವತಾ ಸಮಿತಿಗೆ ಸ್ಪಷ್ಟವಾದ ಸ್ವರೂಪವನ್ನು ನೀಡಿದರು. ಸುಧಾರಣೆಗಳನ್ನು ತಂದರು. ವಂತಿಗೆ ಸಂಗ್ರಹಿಸಲು ಬೇರೆ ಊರುಗಳಿಗೆ ಹೋಗದೆ ಸ್ಥಳೀಯರಿಂದಲೇ ದೇಣಿಗೆ ಹೊಂದಿಸಿಕೊಂಡು ಕಲಾಪಗಳನ್ನು

ನಡೆಸುವ ಏರ್ಪಾಡು ಮಾಡಿದರು. ಕ್ರಮಬದ್ಧವಾದ ಪೂರ್ವಸಿದ್ದತೆ, ಅಗತ್ಯ ಪಟ್ಟವರಿಗೆಲ್ಲ ಆಮಂತ್ರಣ ರವಾನೆ, ಸೂಕ್ತವಾದ ಪ್ರಚಾರ ಜವಾಬ್ದಾರಿಗಳ ವಿಭಜನೆ, ಸಂಘಟನಾ ಚಾತುರ್ಯ ಮುಂತಾದುವುಗಳಿಂದಾಗಿ ಸಮಿತಿಗೆ ವಿಶ್ವಾಸಾರ್ಹತೆ ಮೂಡಿತು.

ಚೌತಿ ಸಮಯದಲ್ಲಿ ಮಳೆ ಬರುವುದರಿಂದ ಪ್ರತಿ ವರ್ಷ ಹೆಚ್ಚುತ್ತಿರುವ ಭಕ್ತ ಜನರಿಗೆ ಸೂಕ್ತ ಸ್ಥಳಾವಕಾಶ ಒದಗಿಸುವುದು ಅಗತ್ಯವಾದ್ದರಿಂದ ಹಿಂದೆ ಹಾಕಲಾಗುತ್ತಿದ್ದ ಟರ್ಪಾಲಿನ್ ಚಪ್ಪರದ ಬದಲು ಗಟ್ಟಿಮುಟ್ಟಾದ ಝಿಂಕ್ಶೀಟಿನ ಪ್ರಯೋಗ ಮಾಡಿದರು. ಮಳೆ ಗಾಳಿಗೆ ಅಲುಗಾಡದ ಈ ತಾತ್ಕಾಲಿಕ ಮಾಡಿನ ನಿರ್ಮಾಣದಿಂದಾಗಿ ತೊಂದರೆ ಕಡಿಮೆಯಾಯಿತು. ಚಪ್ಪರಕ್ಕೂ ನೋಟ ಬಂತು. ಸಾಂಸ್ಕೃತಿಕ ಕಲಾಪಗಳಿಗೆ ಬರುವ ಪ್ರೇಕ್ಷಕರಿಗೆ ಸಮಾಧಾನವಾಯಿತು.

ನಾಗರ ಪಂಚಮಿ ದಿನ ಮೂರ್ತಿ ನಿರ್ಮಾಣದ ಮುಹೂರ್ತ, ಎರಡು ದಿನಗಳ ಬಳಿಕ ಚಪ್ಪರ ಮುಹೂರ್ತ, ಚೌತಿಯಂದು ವಿಗ್ರಹ ಪ್ರತಿಷ್ಠಾಪನೆ, ಏಳು ದಿನಗಳ ಕಾಲ ಬೆಳಿಗ್ಗೆ ಪೂಜೆ, ಮಧ್ಯಾಹ್ನ ಗಣಹೋಮ, ನೈವೇದ್ಯ ವಿತರಣೆ, ರಾತ್ರಿ ರಂಗಪೂಜೆ ಇತ್ಯಾದಿಗಳನ್ನು ನಿಯಮ ಬದ್ದಗೊಳಿಸಿದ್ದರಿಂದ ಸೇವೆ ಮಾಡಿಸುವವರಿಗೆ ಅನುಕೂಲವಾಯಿತು. ಸೋಮವಾರ ಪಕ್ಕದಲ್ಲೇ ಸಂತೆ ಇರುವುದರಿಂದ ತರಕಾರಿ ಮಾರಲುಕೊಳ್ಳಲು ಬರುವವರಿಗೆಲ್ಲ ಗಣೇಶನ ದರ್ಶನ ಸುಲಭವಾಯಿತು.

ಬೆಳ್ಳಿಹಬ್ಬ :

1982ರಲ್ಲಿ ಶ್ರೀ ದೇವತಾ ಸಮಿತಿಯ ವತಿಯಿಂದ ನಡೆಯುವ ಶ್ರೀ ಗಣೇಶೋತ್ಸವದ ಬೆಳ್ಳಿ ಹಬ್ಬ ವಿಜೃಂಭಣೆಯಿಂದ ನೆರವೇರಿತು. ಆಸ್ತಿಕರ ಅಪೇಕ್ಷೆಯಂತೆ ಇಪ್ಪತೈದು ದಿವಸಗಳ ಕಾಲ ಗಣಪತಿಯ ಪೂಜೆ ಕೈಂಕರ್ಯಾದಿಗಳು ನೆರವೇರಿದುವು. ಆ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಅಧ್ಯಕ್ಷರಾಗಿದ್ದು ಎಂ. ಚಂದ್ರಶೇಖರ ಗೌಡ ಮತ್ತು ಡಿ. ಕೆ. ಹೆಬ್ಬಾರ್ (ಉಪಾಧ್ಯಕ್ಷರು) ಶಾಂತಾರಾಮ (ಕಾರ್ಯದರ್ಶಿ) ಮುಂತಾದವರು ಪದಾಧಿಕಾರಿಗಳಾಗಿದ್ದರು.

ರಜತೋತ್ಸವದ ಅಂಗವಾಗಿ ತಪಸ್ವಿ ಕಾಸರಗೋಡು ಸಂಪಾದಕತ್ವದಲ್ಲಿ ಒಂದು ಸ್ಮರಣಸಂಚಿಕೆಯನ್ನು ಹೊರತರಲಾಯಿತು. ಇದರಲ್ಲಿ ಸರ್ವಧರ್ಮ ಸಮನ್ವಯದ ಮಹತ್ತ್ವ ಹಾಗೂ ಆವಶ್ಯಕತೆ ಕುರಿತು ಹಲವು ಲೇಖನಗಳು ಪ್ರಕಟವಾಗಿವೆ.

“ಸಮರ್ಥರು ಚೌತಿ ಗಣೇಶನಿಗೆ ಹಲವಾರು ಭಕ್ಷ್ಯಗಳನ್ನು ಸಮರ್ಪಿಸಿ ಪ್ರಸಾದ ರೂಪದಲ್ಲಿ ಅವನ್ನು ಭುಂಜಿಸಿ ಆನಂದಪಡುತ್ತಾರೆ. ಆದರೆ ಅಸಮರ್ಥರಾದವರಿಗೆ ಇದು ಅಸಾಧ್ಯ. ಆರ್ಥಿಕವಾಗಿ ಹಿಂದಿರುವಾಗ ವಿಜೃಂಭಣೆಯ ಚೌತಿ ಕಷ್ಟ ಅಂದುಕೊಳ್ಳುತ್ತಾರೆ, ನೊಂದುಕೊಳ್ಳುತ್ತಾರೆ. ಸಾರ್ವಜನಿಕ ಗಣೇಶೋತ್ಸವವೇ ಇದಕ್ಕೆ ಪರಿಹಾರ. ಸಾಮೂಹಿಕ ಪ್ರಾರ್ಥನೆ, ಸೌಹಾರ್ದಗಳಿಗೆ ಇಲ್ಲಿ ಅವಕಾಶವಿದೆ.” ಎಂದು ಸಮಿತಿಯ ವಕ್ತಾರರು ಅಂದು ಹೇಳಿರುವುದು ಸಮಂಜಸವಾಗಿದೆ. ಅಲ್ಲದೆ ದೈವಿಕ ಆರಾಧನೆಯೊಂದಿಗೆ ಭೂತರಾಧನೆ ಯುಕ್ತವೇ. ಉತ್ಸವಗಳಲ್ಲಿ ವಿಜೃಂಭಣೆ ಯಾಕೆ ? ಮುಂತಾದ ಪ್ರಶ್ನೆಗಳಿಗೆ ದೇವತಾ ಸಮಿತಿಯವರು ಉತ್ತರ ಕೊಟ್ಟಿದ್ದಾರೆ. (ಸಮಿತಿಯೊಡನೆ ಪ್ರಶ್ನೆ – ಬೆಳ್ಳಿಹಬ್ಬ ಸ್ಮರಣ ಸಂಚಿಕೆ).

ಇಂದು ಮುಂದು :

ಸ್ವರ್ಣೋತ್ಸವದ ಸಡಗರ – ಸಂಭ್ರಮಗಳಿಗೆ ಅಣಿಯಾಗಿರುವ ಶ್ರೀ ದೇವತಾ ಸಮಿತಿಯು ಈಗಾಗಲೇ ಪುತ್ತೂರಿ ಜನಮಾನಸದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಒತ್ತಿದೆ. ಗಣೇಶನಿಗೆ ಪ್ರಿಯವಾದ ಹಲವು ಧಾರ್ಮಿಕ ಸಾಂಸ್ಕೃತಿಕ ಮತ ಸಾಮಾಜಿಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

ಆತ್ಮಚಿಂತನೆಗೆ ಇದು ಸಕಲ. ಕಳೆದ ಐದು ದಶಕಗಳಲ್ಲಿ ಸಮಿತಿಯು ನಡೆದುಬಂದ ದಾರಿಯೆಡೆಗೆ ಕಣ್ಣು ಹಾಯಿಸುವುದು ಮತ್ತು ಲೋಪದೋಷಗಳನ್ನು ಸರಿಪಡಿಸಿಕೊಂಡು ಋಜುಮಾರ್ಗದಲ್ಲಿ ಮುಂದೆ ಸಾಗುವುದು ಸಮಿತಿಯ ಆದ್ಯ ಕರ್ತವ್ಯ.

ಉತ್ಸಾಹೀ ಕಾರ್ಯಕರ್ತ ಸುಧಾಕರ ಶೆಟ್ಟಿಯವರು ಮತ್ತು ಅವರೊಂದಿಗೆ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಸಂಗಡಿಗರು ಜ್ಯೋತಿಷ್ಯಗಳ ಅಭಿಪ್ರಾಯ ತಿಳಿದುಕೊಂಡು ಪುತ್ತೂರಲ್ಲೊಂದು ಗಣೇಶ ಮಂದಿರ ನಿರ್ಮಿಸಲು ಉದ್ದೇಶಿಸಿದ್ದಾರೆ. ತುಂಬ ಯೋಚಿಸಿ ಮುಂದಡಿಯಿಡಬೇಕಾದ ಯೋಜನೆ ಇದು. ಏಕೆಂದರೆ ಚೌತಿಯ ಗಣಪನ ಉತ್ಸವವು ನಾಲ್ಕಾರು ದಿನ ನಡೆದು ವಿಗ್ರಹದ ಜಲಸ್ತಂಭನದೊಂದಿಗೆ ಮುಗಿಯುತ್ತದೆ. ಆದರೆ ಮಂದಿರದ ವಿಷಯ ಹಾಗಲ್ಲ. ಅದೊಂದು ಶಾಶ್ವತ ರಚನೆ. ಹಾಗಾಗಿ ಅದರ ನಿವೇಶನ, ಸ್ವರೂಪ, ನಿರ್ವಹಣೆ ಮುಂತಾದುವುಗಳ ಕುರಿತು ಸಮರ್ಪಕವಾದ ಚಿಂತನೆ ಅವಶ್ಯ.

ಜೇನಹನಿ :

ಉತ್ಸವಕೆ ಇತಿಹಾಸವರ್ಧ ಶತಮಾನ

ವಿಶ್ಲೇಷಿಸಲು ಬೇಕು ಸಾಧನೆಯಮಾನ

ಆತ್ಮ ಚಿಂತನೆಯಿಂದ ಲೋಪಗಳ ತಿದ್ದಿ

ಮುನ್ನಡೆಯೇ ಗಣಪತಿಯು ಕೊಡಲಿ ಸದ್ಭುದ್ಧಿ

ಪ್ರೊ. ವಿ. ಬಿ. ಅರ್ತಿಕಜೆ

ಪರ್ಲಡ್ಕ, ಪುತ್ತೂರು

ದೇವತಾ ರಶ್ಮಿ, 2017

The post ಶ್ರೀ ಗಣೇಶೋತ್ಸವ : ನಡೆದು ಬಂದ ದಾರಿ – ಪ್ರೊ. ವಿ. ಬಿ. ಅರ್ತಿಕಜೆ first appeared on Puttur Ganapathi.

ಶ್ರೀ ಗಣೇಶೋತ್ಸವ – ಎ. ವಸಂತ ಕುಮಾರ್ ಕೆದಿಲಾಯ
॥ ಶ್ರೀ ಮಹಾಲಿಂಗೇಶ್ವರಾಯ ನಮಃ ॥

॥ ಶ್ರೀ ಮಹಾಗಣಪತಯೇ ನಮಃ ||

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ।

ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ||

66ನೇ ಶ್ರೀ ಮಹಾಗಣೇಶೋತ್ಸವ

ಭಾರತ ದೇಶದಲ್ಲಿ ಆಚರಣೆಯಲ್ಲಿರುವ ಶಿವರಾತ್ರಿ, ಕೃಷ್ಣಾಷ್ಠಮಿ, ಏಕಾದಶಿ, ಸತ್ಯನಾರಾಯಣ ವೃತ, ಷಷ್ಠಿ ವೃತ, ಶನಿ ವೃತ, ರಾಘವೇಂದ್ರ ವೃತ, ಸೋಮವಾರ ವೃತ, ಗಣೇಶನ ವೃತ, ಗೌರಿ ವೃತ ಇತ್ಯಾದಿ. ಅನೇಕ ಧಾರ್ಮಿಕ ಆಚರಣೆ ಪೂಜಾದಿಗಳೇ ಭಾರತೀಯ ಸಂಸ್ಕೃತಿಗೆ ಅಡಿಗಲ್ಲಾಗಿದೆ. ಎಲ್ಲರೂ ಜತೆಗೂಡಿ ಮಾಡುವ ಸಂತೋಷದ ಆಚರಣೆಯಿಂದ ಸಂಘಟನೆ, ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುವ ಈ ಧಾರ್ಮಿಕ ಕಾರ್ಯಗಳು ಹಬ್ಬವೆನಿಸಿವೆ. ಭಾದ್ರಪದ ಮಾಸದ ಚತುರ್ಥಿ ದಿನ ಗಣೇಶ ಚತುರ್ಥಿ ಆಚರಣೆ ಬಹಳ ಶ್ರೇಷ್ಠ. ಯಾವುದೇ ವ್ರತ, ಪೂಜೆ, ಆಚರಣೆ ಮಾಡಬೇಕಾದರೆ ಅವುಗಳ ಮಹತ್ವ, ಅರ್ಥಜ್ಞಾನವಿದ್ದು ಮಾಡಿದರೆ ಬಹಳ ಫಲ ಎಂದು ಶಾಸ್ತ್ರ ಪ್ರಕಾರರ ಅಭಿಮತ. ಗಣಪತಿ ಎಂದರೆ ಗಣಾನಾಂ ಪತಿಃ, ಗಣಗಳ ಒಡೆಯ, ಗಣಗಳೆಂದರೆ ಅಷ್ಟ ವಸುಗಳ ಸಮೂಹ, ಅಂದರೆ ದಿಗ್ದೇವತೆಗಳು ಪತಿಃ ಎಂದರೆ ರಾಜ, ಒಡೆಯ ಎಂದರ್ಥ. ಅಗ್ನಯೇ ಸ್ವಾಹಾ, ಇಂದ್ರಾಯ ಸ್ವಾಹಾ ಎಂದು ಅಗ್ನಿಯಲ್ಲಿ ಆಹುತಿ ಕೊಡುವಾಗ ಅಗ್ನಿ, ಇಂದ್ರರು ಗಣಪತಿಯ ಒಪ್ಪಿಗೆ ಇಲ್ಲದೆ ಆಹುತಿ ಸ್ವೀಕಾರ ಮಾಡಲಾರರು. ಆದ್ದರಿಂದಲೇ ಗಣಪತಿಗೆ ಅಗ್ರಪೂಜೆಯನ್ನು ಕೊಟ್ಟು ಯಜ್ಞಗಳನ್ನು ಪ್ರಾರಂಭಿಸುವರು. ಎಲ್ಲಾ ಮಂಗಲ ಕಾರ್ಯವನ್ನು ಮಾಡುವಾಗಲೂ ಗಣಪತಿ ಹವನವನ್ನು ಮಾಡಿ ವಿವಾಹಾದಿ ಶುಭಕಾರ್ಯವನ್ನು ಮಾಡುವರು. “ಪ್ರತಿ ಪರ್ವ ರಸ್ತೋದಯ” ಅನುಕೂಲವಿದೆ ಎಂದೆನಿಸಿದಾಗ ಹಬ್ಬವು ಒದಗಿ ಬರುವುದಿಲ್ಲ. ಕಾಲ, ಸಂಧಿ, ಋತು ಮಾಸವನ್ನು ಕಾಯಬೇಕು. ಈ ಭಾರತವು ಹಬ್ಬಗಳು ತುಂಬಿದ ನಾಡು. ಪ್ರತೀ ಭಾರತೀಯ ಪ್ರಜೆಯು ಆಚರಿಸಬೇಕಾದ ಪ್ರಮುಖ ಹಬ್ಬಗಳೆಂದರೆ ಯುಗಾದಿ, ರಾಮನವಮಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಶಿವರಾತ್ರಿ ಇತ್ಯಾದಿ ನಾಗರ ಪಂಚಮಿಯಿಂದ ಹಿಡಿದು ದೀಪಾವಳಿವರೆಗೆ ಹಬ್ಬಗಳ ದೀರ್ಘ ಋತು ಎಂದು ಹೇಳಬಹುದು. ಮನೆಯಲ್ಲಿ ಕುಳಿತು ಬೇಡವಾದ ಹರಟೆ ಹೊಡೆಯುವುದು, ತಿಂಡಿ ತಿನಿಸುಗಳಲ್ಲೇ ಕಾಲ ಕಳೆಯುವುದು, ವಿನೋದ, ಆಟ, ಸನ್ಮಾನ ಈ ಎಲ್ಲಾ ಜೀವನ ಜಂಜಾಟದಿಂದ ಮನಸ್ಸನ್ನು ನಿರಂತರ ಬಂಧಿಸಿಡುತ್ತವೆ. ಮನಸ್ಸಿನ ನೆಮ್ಮದಿ, ಶಾಂತಿಗೋಸ್ಕರ ಯೋಗ್ಯ ಮೂರ್ತಿದರ್ಶನ, ದೇವಸ್ಥಾನ, ಧ್ಯಾನ ಇತ್ಯಾದಿಗಳಿಂದ ಸ್ವಚ್ಛ ಶಾಂತಿಯುತ ಪವಿತ್ರ ವಾತಾವರಣ ಬೇಕಾಗುತ್ತದೆ. ಅಂತಹ ಮಹಾಗಣಪತಿಯ ಮೂರ್ತಿಯನ್ನು ಕಂಡೊಡನೆ ಮನಸ್ಸಿನ ಕಳವಳ, ಸಂದೇಹ ಎಲ್ಲಾ ಕರ್ಮಗಳ ಜಂಜಡವು ನಾಶವಾಗುತ್ತದೆ. ಗಣಪತಿಗೆ ಕೆಂಪು ಹೂ, ಕೆಂಪು ವಸ್ತ್ರ, ರಕ್ತ ಚಂದನ, ಮೋದಕ ಇಪ್ಪತ್ತೊಂದು, ಇಪ್ಪತ್ತೊಂದು ದೂರ್ವಾ ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿ ಕೊಳ್ಳಬೇಕು

ಶುಕ್ಲ ಪಕ್ಷದ ಚೌತಿಯನ್ನು ವಿನಾಯತಿ ಎಂದು ಕೃಷ್ಣ ಪಕ್ಷದ ಚೌತಿಯನ್ನು ಸಂಕಷ್ಟ, ಚೌತಿ ಎನ್ನುವರು. ತಂತ್ರ ಕೃತಿ ಪೂರ್ತಿ ಉಪವಾಸವಿರಬೇಕು. ನೀರಾಹಾರಿಯಾಗಿರಬೇಕು. ಸಂಜೆ ಪುನಃ ಸ್ನಾನ ಮಾಡಿ ಗಣಪ ಪೂಜೆಗೆ ಸಿದ್ದಪಡಿಸಿ ರಾತ್ರಿ ಚಂದ್ರ ದರ್ಶನವಾದ ಮೇಲೆ ಪೂಜಿಸಿ ನೈವೇದ್ಯ ಮಾಡಿ, ಅರ್ಘ್ಯ ಕೊಟ್ಟು ನಮಸ್ಕಾರ ಮಾಡಿ ನಂತರ ಬೋಜನ ಮಾಡಬೇಕು. ಸಂಕಷ್ಟ ಎಂದರೆ ಸಂಕಟ, ಎಲ್ಲಾ ರೀತಿಯ ಕಷ್ಟ, ಸಂಕಟವನ್ನು ಪರಿಹಾರ ಮಾಡುವ ವಿಘ್ನ ಗಣೇಶ ಚತುರ್ಥಿಯ ದಿನ ಯಾರೂ ಚಂದ್ರನನ್ನು ನೋಡಬಾರದು. ಸಂಕಷ್ಟ ಚೌತಿಯ ದಿನ ಚಂದ್ರನನ್ನು ನೋಡದ ಆಹಾರ ಸೇವಿಸಬಾರದು. ಮಂಗಳವಾರ ಬರುವ ಚೌತಿಯನ್ನು ಅಂಗಾರಕಿ ಎನ್ನುತ್ತಾರೆ. ಅಂಗಾರ ಎಂದರೆ ಮಂಗಳ ಗ್ರಹ, ಈ ಗ್ರಹದ ಮೇಲೆ ಗಣಪತಿಯ ವಿಶೇಷ ಪ್ರಭಾವವಿರುವುದರಿಂದ ಅಂಗಾರಕ ದೋಷವಿರುವ ಪ್ರತಿಯೊಬ್ಬರೂ ಇದನ್ನು ಆಚರಿಸಿದರೆ ಶ್ರೇಯಸ್ಕರ, ಮಂಗಳವಾರ ಬರುವ ಚೌತಿಯನ್ನು ಆಚರಣೆ ಮಾಡಿದರೆ ಇಡೀ ವರ್ಷ ಮಾಡಿದ ಶುಕ್ಲಪಕ್ಷದ ಚೌತಿ ಮತ್ತು ಸಂಕಷ್ಟ ಚೌತಿ ಆಚರಣೆಯ ಫಲವನ್ನು ಗಣಪತಿ ಅನುಗ್ರಹಿಸುವನು ಎಂದು ಶಾಸ್ತ್ರ, ಸುಮುಖ, ಏಕದಂತ, ಕಪಿಲ, ಗಜಕರ್ಣಕ, ಲಂಬೋಧರ, ವಿಕಟ, ವಿಘ್ನರಾಜ, ಗಣಾಧಿಪ, ಧೂಮಕೇತು, ಫಾಲಚಂದ್ರ, ಗಜಾನನ, ಸಿದ್ಧಿ ವಿನಾಯಕ, ಕ್ಷಿಪ್ರ ಪ್ರಸಾದ ಇತ್ಯಾದಿ ಅನೇಕ ಹೆಸರಿನಿಂದ ಅರ್ಚಿಸಬೇಕು.

ಗಣಪತಿಗೆ ನಡೆಯುವ ಸೇವೆಗಳಲ್ಲಿ ಬಹಳ ಫಲಪ್ರದಾಯಕ ಸೇವೆ ಎಂದರೆ ಮೂಡಪ್ಪ ಸೇವೆ. ಗಣಪತಿಗೆ ವಿಶೇಷ ಪೂಜೆ ನೆರವೇರಿಸಿ ಮಹಾಗಣಪತಿಯ ವಿಗ್ರಹದ ಸುತ್ತ ಕಬ್ಬಿನ ಬೇಲಿಯನ್ನು ರಚಿಸಿ ಅದರೊಳಗೆ ಹದಿನಾರು ಮುಡಿ ಅಕ್ಕಿಯ ಅಪೂಪವನ್ನು, ಒಂದು ಮುಡಿ ಅಕ್ಕಿಯ ಪಚ್ಚಪ್ಪವನ್ನು ನೂರ ಎಂಟು ತೆಂಗಿನಕಾಯಿಯ ಅಷ್ಟ ದ್ರವ್ಯವನ್ನು ತುಂಬಲಾಗುವುದು. ನಡು ನಡುವೆ ಜೇನು ತುಪ್ಪ, ಕಲ್ಲು ಸಕ್ಕರೆ, ಒಣ ದ್ರಾಕ್ಷಿ, ತುಪ್ಪವನ್ನು ಬಳಸಲಾಗುವುದು. ವಿಗ್ರಹದ ಜಿಹ್ವಾಗ್ರದವರೆಗೆ ಆವರಿಸಿರಬೇಕು. ಫಲಪುಷ್ಪಗಳಿಂದ ಅಲಂಕರಿಸಿ ಪೂಜಿಸಿ ಪ್ರಾರ್ಥಿಸಿ ಕವಾಟ ಬಂಧನ ಮಾಡಲಾಗುವುದು. ಮರುದಿನ ಪೂರಾಹ್ನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಲೋಕಕ್ಕೆ ಕಲ್ಯಾಣವಾಗಲಿ, ಎಲ್ಲರು ಕ್ಷೇಮದಿಂದಿರಲಿ, ವಿದ್ಯಾ, ಬುದ್ಧಿ, ಸನ್ಮಂಗಲ ಉಂಟಾಗಿ ಸುಭಿಕ್ಷೆ ಉಂಟಾಗಲಿ ಎಂದು ಪ್ರಾರ್ಥಿಸಬೇಕು. ವೇದಘೋಷ, ಮಂಗಲಾಷ್ಟಕ, ವಾದ್ಯ ಘೋಷಗಳೊಂದಿಗೆ ಕವಾಟೋದ್ಘಾಟನೆ ಮಾಡಬೇಕು. ಅಪೂಪ ಪರ್ವದಿಂದ ಇಳಿದು ಬಂದಂತೆ ತೋರುವ ಮಹಾಗಣಪತಿಯ ದರ್ಶನವು ಜೀವನದ ಒಂದು ಮಹಾ ಭಾಗ್ಯ, ಯೋಗ. ಎಲ್ಲಾ ಭಕ್ತರು ಭಕ್ತಿ ಪರವಶರಾಗಿ ನೋಡುವ ಈ ಕಾಲ ಬಹಳ ಪುಣ್ಯ ಕಾಲ, ನಂತರ ಎಲ್ಲಾ ಭಕ್ತರು ಅಪೂಪಾದಿ ನೈವೇದ್ಯಗಳನ್ನು ಪ್ರಸಾದ ಎಂದು ತೆಗೆದುಕೊಳ್ಳಬೇಕು. ಗಜಮುಖನು, ಮಹಾಕಾಯನು, ಲಂಬೋಧರನೂ ಆದ ಗಣಪತಿಯು ಬಹಳ ಚಿಕ್ಕದಾದ ಇಲಿಯನ್ನು ವಾಹನವನ್ನಾಗಿಸಿ ತನ್ನ ಮಹಿಮೆಯನ್ನು ತೋರಿದಂತೆ ಹಿರಿಯರ ಮುಂದೆ ಕಿರಿಯರು ಹೇಗಿರಬೇಕು ಎಂಬುವುದನ್ನು ಲೋಕಕ್ಕೆ ತಿಳಿಸುವಂತೆ ಅಗ್ರಪೂಜೆಯಗೊಂಬ ಈ ಹೇರಂಬನು ಆಡಂಬರವಿಲ್ಲದೆ ಮೂರ್ತಿಯೊಳಗೆ ನೆಲೆಯಾಗಿ ಭಕ್ತಿಯಿಂದ ಬೇಡಿದವರಿಗೆ ಅಭಯ ಹಸ್ತನಾಗಿರುವನು. ಆಚಾರ್ಯತಪಸಾ, ಆಮ್ನಾಯ ಜಪೇನ ನಿಯಮೇನ ಚ। ಉತ್ಸವೇನ, ಅನ್ನದಾನೇನ ಕ್ಷೇತ್ರವೃದ್ಧಿಸ್ತು ಪಂಚಧಾ।। ಎಂಬ ಶಾಸ್ತ್ರ ವಚನವಿದೆ. ತಂತ್ರಿಯ ಭಕ್ತಿ ಶ್ರದ್ಧೆಯ ಪೂಜೆ, ತಪಸ್ಸು, ವೇದಾಧ್ಯಯನ, ಜಪ, ಹೋಮ, ವೈದಿಕ ಕರ್ಮಗಳು ಶಿಸ್ತಿನಿಂದ ನಡೆಯುವ ನಿಯಮ ಬದ್ರ, ನಿತ್ಯ ಪೂಜಾ, ರಂಗ ಪೂಜಾದಿಗಳು ಉತ್ಸವ, ಜಾತ್ರೆ ಮುಂತಾದ ಸಾಮೂಹಿಕ ಕ್ರಿಯಾ ಕಲಾಪಗಳು ಅನ್ನದಾನ ಈ ಎಲ್ಲಾ ರೀತಿಯಿಂದ ಸಾನಿಧ್ಯ ವೃದ್ಧಿಯಾಗುವುದು. ಈ ಪುತ್ತೂರಿನ ಮಹಾಲಿಂಗೇಶ್ವರನ ಪುಣ್ಯದ ಮಣ್ಣಿನಲ್ಲಿ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ನಡೆಯುವ ಈ ಮಹಾಗಣೇಶೋತ್ಸವದ ಸುವರ್ಣ ಮಹೋತ್ಸವ ಯಶಸ್ವಿಯಾಗಿ ಬರುವ ಭಕ್ತರ ಜೀವನ ಸುವರ್ಣಮಯವಾಗುವಂತೆ ಗಣಪತಿಯು ನಮ್ಮೆಲ್ಲರನ್ನೂ ಅನುಗ್ರಹಿಸಲಿ.

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ।

ತನ್ನೋ ದಂತಿಃ ಪುಚೋದಯಾತ್||

॥ ಸರ್ವೆ ಜನಾಃ ಸುಖಿನೋ ಭವಂತು |

ಎ. ವಸಂತ ಕುಮಾರ್ ಕೆದಿಲಾಯ

ಆಕಿರೆಬರೆ

ಮುಖ್ಯ ಅರ್ಚಕರು,

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು

The post ಶ್ರೀ ಗಣೇಶೋತ್ಸವ – ಎ. ವಸಂತ ಕುಮಾರ್ ಕೆದಿಲಾಯ first appeared on Puttur Ganapathi.

ಗಣೇಶನ ಬಗ್ಗೆ ತಾತ್ವಿಕ ವಿಮರ್ಶೆ – ಎನ್. ಸುಬ್ರಹ್ಮಣ್ಯ ಹೊಳ್ಳ
ಅಭೀಪ್ಪಿತಾರ್ಥ ಸಿದ್ಧರ್ಥಂ ಪೂಜಿತೋಯಃ ಸುರೈರಪಿ |

ಸರ್ವ ವಿಘ್ನಚ್ಛಿದೇ ತಸ್ವಯೈ ಗಣಾಧಿಪತಯೇ ನಮಃ ||

ದೇವತೆಗಳಲ್ಲಿ ಸರ್ವೋತ್ತಮನಾದವನು ಮಹಾವಿಷ್ಣು ಅವನೇ ಒಬ್ಬೊಬ್ಬ ದೇವತೆಗಳಲ್ಲಿ ಇದ್ದು ಆಯಾಯ ದೇವತೆಗಳಿಂದ ಒಂದೊಂದು ಕೆಲಸ ಮಾಡಿಸುತ್ತಾನೆ. ಗಣೇಶನ ಅಂತರ್ಯಾಮಿಯಾಗಿ ವಿಶ್ವಂಭರನಾಗಿದ್ದುಕೊಂಡು ಸಕಲ ವಿಘ್ನವಿನಾಶ ಮಾಡಿಸುತ್ತಾನೆ. ಆದ್ದರಿಂದ ವಿಘ್ನನಾಶಕೋಸ್ಕರ

ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |

ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥

ವಿಷ್ಣುವನ್ನೇ ವಿಘ್ನವಿನಾಶಕ್ಕಗಿ ಸ್ತೋತ್ರ ಮಾಡುತ್ತೇವೆ. ವಿಘ್ನನಾಶನ ಮಾಡುವಂತಹ ಒಂದು ವಿಷ್ಣುವಿನ ವಿಭೂತಿ ರೂಪ ಗಣೇಶನ ಒಳಗೆ ಇದೆ. ಈ ಗಣೇಶನು ನಾನು ದುಷ್ಟರಿಗೆ ವಿಘ್ನವನ್ನು ಉಂಟು ಮಾಡುವವನು. ಪುಣ್ಯವಂತರಾದ ಸಜ್ಜನರ ಸಮೂಹಕ್ಕೆ ಉಂಟಾಗುವ ವಿಘ್ನಗಳನ್ನು ಪರಿಹರಿಸುವವನು ಆಗಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಲೋಕಕ್ಕೆ ತಿಳಿಸುವುದಕ್ಕೋಸ್ಕರ ರಾವಣನ ಇಚ್ಛೆಗೆ ವಿಘ್ನವನ್ನು ಉಂಟುಮಾಡಿದ ದೇವತೆಗಳು ಮತ್ತು ಮುನಿಗಳ ಸಮೂಹದ ಅಭೀಷ್ಠ ಪ್ರಾಪ್ತಿಗೆ ಉಪಾಯ ರೂಪನಾಗಿರುವ ಗಣೇಶನು ಆತ್ಮಲಿಂಗವನ್ನು ಗೋಕರ್ಣದಲ್ಲಿ ಇಟ್ಟು ಬಿಟ್ಟ. ಗೋಕರ್ಣ ವಿಷಯವಾಗಿ ಹೇಳುವುದಾದರೆ ಹಿಂದೆ ರಾವಣನು ಈಶ್ವರನನ್ನು ಕುರಿತು ತಪಸ್ಸು ಮಾಡಿದಾಗ ಈಶ್ವರನು ಪ್ರಸನ್ನನಾಗಿ ತನ್ನ ಸನ್ನಿಧಾನ ಯುಕ್ತವಾದ ಲಿಂಗವನ್ನು ಕೊಟ್ಟು “ಈ ಲಿಂಗವು ನಿನ್ನ ಮನೆಯಲ್ಲಿ ಇರುವವರೆಗೆ ಯಾರು ನಿನ್ನನ್ನು ಜಯಿಸಲಾರರು. ಆದರೆ ನೀನು ಈ ಲಿಂಗವನ್ನು ದಾರಿಯಲ್ಲಿ ಎಲ್ಲೂ ಇಡಕೂಡದು. ಇಟ್ಟರೆ, ತಿರುಗಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.” ಎಂದು ಹೇಳಿದನು. ಈ ಸಮಯದಲ್ಲಿ ರಾವಣನ ಬಳಿ ಲಿಂಗ ಇರುತ್ತಿದ್ದರೆ, ಅವನ ದುರಾಚಾರ ಇನ್ನೂ ಹೆಚ್ಚಾಗುತ್ತಿತ್ತು ಹಾಗಾಗಿ ಅವನ ಪಾಲಿಗೆ ವಿಘ್ನು ಕೊಟ್ಟು ಲಿಂಗವು ಸಜ್ಜನರ ಉದ್ಧಾರಕ್ಕಾಗಿ ಗೋಕರ್ಣದಲ್ಲಿ ಪ್ರತಿಷ್ಠಾಪನೆಗೊಳ್ಳಲು ಕಾರಣನಾದ.

ಇಂತಹ ಗಣೇಶನು ನಾನಾ ಹೆಸರಿನಿಂದ ಕರೆಸಿಕೊಳ್ಳುವನಾಗಿದ್ದಾನೆ. ವಿಘ್ನೇಶ್ವರ, ಏಕದಂತ, ರಕ್ತಾಂಭರ ಇತ್ಯಾದಿಯಾಗಿ ಇವನು ಪರಮ ಹರಿಭಕ್ತ, ಶಿವಪುತ್ರ, ವ್ಯಾಸಕರುಣಾಪುತ್ರ ಹೇಗೆಂದರೆ ವೇದವ್ಯಾಸರಿಂದ ಮಹಾಭಾರತಾದಿ ಲೇಖನ ಕಾರ್ಯದಲ್ಲಿ ನೇಮಿಸಲ್ಪಟ್ಟಿದ್ದನು. ಮಹಾ ಭಾರತದ 8800 ಕೋಟಿ ಶ್ಲೋಕಗಳನ್ನು ಅರ್ಥ ಮಾಡಿಕೊಂಡು ಬರೆದ ಮಹಾಪುರುಷ ಮತ್ತು ಆಕಾಶ ತತ್ವಕ್ಕೆ ಅಭಿಮಾನಿ. ಇವನು ಒಂದು ದಂತವನ್ನು ಲೇಖನಿ ಮಾಡಿಕೊಂಡಿದ್ದ ಹಾಗೂ ದೈತ್ಯನ ಸಂಹಾರಕ್ಕಾಗಿ ಒಂದು ದಂತವನ್ನು ಕಿತ್ತೆಸೆದು ಏಕದಂತ ಎಂಬ ಹೆಸರು ಪಡೆದ ಉಲ್ಲೇಖ ಇದೆ. ಇವನು ದೇವತೆಗಳ ಸಾಲಿನಲ್ಲಿ ಕುಭೇರ. ವಿಶ್ವಕ್ಸನ ಮತ್ತು ಅಶ್ವಿನೀ ದೇವತೆಗಳಿಗೆ ಸಮಾನ ಕಕ್ಷೆಯಲ್ಲಿರುವವನು.

ಇಲಿ ರೂಪದಿಂದ ಬಂದಿದ್ದ ದುಷ್ಟದೈತ್ಯನನ್ನು ಪರಾಭವಗೊಳಿಸಿ ಅವನನ್ನು ವಾಹನವನ್ನಾಗಿ ಮಾಡಿಕೊಂಡ ಮಹಾನುಭಾವ ಇವನು. ಕಲೌ ಸತ್ಯವಿನಾಯಕೌ ಎಂಬ ಮಾತಿನಂತೆ ಕಲಿಯುಗದಲ್ಲಿ ಬೇಡಿದವರ ಇಷ್ಟಾರ್ಥವನ್ನು ತ್ವರೆಯಿಂದ ಈಡೇರಿಸುವವನಾದ್ದರಿಂದ ಇವನು ಕ್ಷಿಪ್ರ ಪ್ರಸಾದ ಎಂದೇ ಪ್ರಖ್ಯಾತಿಯಾಗಿರುವನು ಮತ್ತು ಗಣೇಶನು ಸಿದ್ಧಿವಿನಾಯಕ, ಬುದ್ಧಿವಿದ್ಯಾ ಪ್ರದಾಯಕ, ಶುದ್ಧಭಕ್ತಿವಿರಕ್ತಿದಾಯಕ, ಏಕವಿಂಶತಿಮೋದಕಪ್ರಿಯ ಲೇಖಕಾಗ್ರಹಿ, ಗೌರಿತನಯ, ಮೃದ್ಭವ, ಮಣ್ಣಿನಿಂದ ಜನಿಸಿದವನು ಮಂಗಳ ಮೂರ್ತಿ ಎಂಬ ನಾನಾ ಅನ್ವರ್ಥದಿಂದ ಕರೆಸಿಕೊಳ್ಳಲ್ಪಡುವನು.ಇಂತಹ ಗಣೇಶನಲ್ಲಿ ನಮ್ಮ ಪ್ರಾರ್ಥನೆ “ಕೆಟ್ಟ ಜನ್ಮ ಬಂದರೂ ಚಿಂತೆಯಿಲ್ಲ, ಕೆಟ್ಟ ಜ್ಞಾನ ಬರದಿರಲಿ” ಎಂದು.

ಎನ್. ಸುಬ್ರಹ್ಮಣ್ಯ ಹೊಳ್ಳ

ಸಂಸ್ಕೃತ ಪಂಡಿತರು ಮತ್ತು ಪುರೋಹಿತರು

ಕೇಪುಳು, ಪುತ್ತೂರು

The post ಗಣೇಶನ ಬಗ್ಗೆ ತಾತ್ವಿಕ ವಿಮರ್ಶೆ – ಎನ್. ಸುಬ್ರಹ್ಮಣ್ಯ ಹೊಳ್ಳ first appeared on Puttur Ganapathi.

ಅಂದಿನ ಗಣಪ ಇಂದಿನ ಸ್ವರ್ಣ ಗಣಪ
1957ರಲ್ಲಿ ದಿವಂಗತ ಡಾ. ಕೆ. ಹನುಮಂತ ಮಲ್ಯರು ಸ್ಥಾಪಿಸಿದ ಪುತ್ತೂರು ಶ್ರೀ ದೇವತಾ ಸಮಿತಿ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ಸುವರ್ಣ ಮಹೋತ್ಸವದ ಆಚರಣೆಯ ಸಿದ್ಧತೆಯಲ್ಲಿರುವುದು ಸಂತಸದ ವಿಚಾರ. ಅಂದು ಪರಿಸರದ ಆಪ್ತರೊಂದಿಗೆ ದಿ. ಹನುಮಂತ ಮಲ್ಯರಿಂದ ಸ್ಥಾಪನೆಗೊಂಡ ಧಾರ್ಮಿಕ ಸಂಘಟನೆ ತನ್ನ ಐದು ದಶಕಗಳ ಸುದೀರ್ಘ ಇತಿಹಾಸದಲ್ಲಿ ಬೆಳೆದು ಇಂದು ಹೆಮ್ಮರವಾಯಿತು.

ದಿ. ಮಲ್ಯರ ಮೂಲ ಆಶಯಗಳಿಗೆ ಚ್ಯುತಿ ತಾರದೆ ಉತ್ಸವವನ್ನು ನಡೆಸಿಕೊಂಡು ಸಮಿತಿಯ ಸದಸ್ಯರು ಬಂದಿರುತ್ತಾರೆ. ಪ್ರಾರಂಭದ ನಾಲ್ಕು ವರ್ಷ ಗಣೇಶೋತ್ಸವವು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದು ಬಂದಿತ್ತು. ನಂತರ ಭಕ್ತರ ಅನುಕೂಲಕ್ಕಾಗಿ ಕೋರ್ಟು ಕಿಲ್ಲೆ ಮೈದಾನಕ್ಕೆ ವರ್ಗಾಯಿಸಲಾಯಿತು. ಐವತ್ತರ ಸಂಭ್ರಮವನ್ನು ಅರ್ಥಪೂರ್ಣವಾಗಿಸಬೇಕೆಂಬ ನೆಲೆಯಲ್ಲಿ ಹತ್ತು ಹಲವು ವೈವಿಧ್ಯಮಯ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 11 ದಿನಗಳ ಕಾಲವೂ ದಿನನಿತ್ಯ ದೇವರ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಈ ಬಾರಿ ಗಣಪತಿಗೆ ನಡೆಯುವ ಸೇವೆಗಳಲ್ಲಿ ಬಹಳ ಫಲಪ್ರದಾಯಕ ಸೇವೆ ಮೂಡಪ್ಪ ಸೇವೆ ಕೂಡಾ ನಡೆಯಲಿದೆ.

ಈ ಮಹಾಗಣಪತಿಗೆ ಉತ್ಸವದ ರಜತ ಮಹೋತ್ಸವ ಮತ್ತು ಸ್ವರ್ಣ ಮಹೋತ್ಸವ ಎರಡೂ ಸಂದರ್ಭಗಳಲ್ಲಿ ಶ್ರೀ ದೇವತಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಅವಕಾಶ ಎನ್. ಸುಧಾಕರ ಶೆಟ್ಟಿಯವರಿಗೆ ಒದಗಿ ಬಂದಿರುವುದು ಒಂದು ಯೋಗವೇ ಅನ್ನಬೇಕು.

ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಭಕ್ತಾದಿಗಳು ಒಂದುಗೂಡಿ ಇನ್ನೂ ಗಟ್ಟಿಯಾಗಿ ಅರ್ಥಪೂರ್ಣವಾಗಿ ಆಚರಣೆಯಾಗುವಂತಾಗಲಿ ಅನ್ನುವುದೇ ನಮ್ಮ ಆಶಯ. ಅಂದಿನ ಗಣಪ ಇಂದಿನ ಸ್ವರ್ಣ ಗಣಪ.

ದಿ| ಯನ್. ಪ್ರಭಾಕರ ಶೆಟ್ಟಿ

ಉಪಾಧ್ಯಕ್ಷರು

ದೇವತಾ ಸಮಿತಿ, ಪುತ್ತೂರು

The post ಅಂದಿನ ಗಣಪ ಇಂದಿನ ಸ್ವರ್ಣ ಗಣಪ first appeared on Puttur Ganapathi.

ಮಣ್ಣಿನಿಂದ ಮೂರ್ತಿಯವರೆಗೂ
34 ವರ್ಷಗಳಿಂದ ಕಿಲ್ಲೆ ಮೈದಾನ ಗಣಪತಿ ಮೂರ್ತಿ ರಚಿಸುತ್ತಿರುವ ರಮೇಶ್ ಪೂಜಾರಿ.

ಅದು 1988 ರ ಸಮಯ. ಡಾ ಹನುಮಂತ ಮಲ್ಯರವರು   ಕೋರ್ಟ್ ರೋಡ್ ಗಣಪತಿ ಎಂದೇ ಪ್ರಸಿದ್ದವಾಗಿರುವ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು. ಆ ವರ್ಷ ಗಣೇಶೋತ್ಸವಕ್ಕೆ ಗಣಪತಿ ಮೂರ್ತಿ ರಚಿಸಲು ಕಲಾವಿದರು ಲಭಿಸಲಿಲ್ಲ; ಪ್ರಸಿದ್ದರಿಗೆ ಮೂರ್ತಿ ರಚನೆಯನ್ನು ನೀಡಲು ಹಣಕಾಸಿನ ಸಮಸ್ಯೆಯೂ ಇತ್ತು ಆ ಸಂದರ್ಭದಲ್ಲಿ 27 ವರ್ಷದ ರಮೇಶ್ ಪೂಜಾರಿಯವರು ಮಲ್ಯರಿಗೆ ಕಂಡರು. ‘ನಾನು ಹೇಳುತ್ತೇನೆ, ನೀನು ಮಾಡು ‘ ಎಂಬ ಆದೇಶ. ಸಂದರ್ಭವನ್ನು ಸವಾಲಾಗಿ ಸ್ವೀಕರಿಸುವ

ತರುಣನಾದ ರಮೇಶ್ ಪೂಜಾರಿಯವರು ಕಾರ್ಯವನ್ನು ಕೈಗೆತ್ತಿಕೊಂಡರು. ಮಲ್ಯರವರ ನಿರ್ದೇಶನದಂತೆ ರಚನೆ ಮುಂದುವರಿದು , ಮೂರ್ತಿ ಸಿದ್ದವಾಯಿತು. ಆ ವರ್ಷದ ಗಣೇಶೋತ್ಸವ ಕಳೆದು ಮುಂದಿನ ಉತ್ಸವದ ಮೊದಲು ಮಲ್ಯರು ದೈವಾಧೀನರಾಗುತ್ತಾರೆ.ಮುಂದೆ ನೆಲ್ಲಿಕಟ್ಡೆ ಸುಧಾಕರ ಶೆಟ್ಟಿಯವರು ದೇವತಾ ಸಮಿತಿಯ ಅಧ್ಯಕ್ಷರಾಗಿ ಮುಂದುವರಿದರು.   ಒಂದು ವರ್ಷ ಬಿಟ್ಟು ಮುಂದೆ ನಿರಂತರವಾಗಿ ರಮೇಶ್ ಪೂಜಾರಿಯವರೇ ಮೂರ್ತಿಯನ್ನು ರಚಿಸುತ್ತಿದ್ದಾರೆ. ನಾಗರ ಪಂಚಮಿಯ ದಿನ ಮೂರ್ತಿ ರಚನೆಗೆ  ಆರಂಭಿಸುತ್ತಾರೆ. ಒಂದು ತಿಂಗಳ ಕಾಲಾವಧಿ ಲಭಿಸಿದರೆ , ಮಣ್ಣಿನ ಮೂರ್ತಿ ಸರಿಯಾಗಿ ಒಣಗಿ ಸಿದ್ದಗೊಳ್ಳುತ್ತದೆ: ಇಲ್ಲವಾದರೆ ಹಸಿಯಾಗಿ ಇರುತ್ತದೆ.

ಈ ಮೂರ್ತಿ ರಚನೆ ಆರಂಭಿಸಿದ ಬಳಿಕ, ಇತರೆಡೆಯ ಕನಿಷ್ಟ 25 ಮೂರ್ತಿಗಳನ್ನು ರಚಿಸುತ್ತಿದ್ದರು. ಈಗ ಎಲ್ಲವನ್ನೂ ಇತರರಿಗೆ ಒಪ್ಪಿಸಿ ಕೇವಲ ಒಂದು ಗಣಪತಿ ಮೂರ್ತಿಯನ್ನು ರಚಿಸುತ್ತಿದ್ದಾರೆ. ಇತರ ಗಣಪತಿ ಮೂರ್ತಿಗಿಂತ ಕಿಲ್ಲೆ ಮೈದಾನ ಗಣಪತಿ ಪ್ರತ್ಯೇಕವಾಗಿದೆ ಎಂದು ಹೇಳುವ ರಮೇಶ್ ಪೂಜಾರಿಯವರು, ಈ ಗಣಪತಿ ಮೂರ್ತಿಯನ್ನು   ಮರದ ಹಲಗೆ ಬಳಸದೆ ನೇರವಾಗಿ ಬೆಳ್ಳಿ ಪೀಠದ ಮೇಲೆ ರಚಿಸಲಾಗುತ್ತಿದೆ. ಕೇವಲ ರಚನೆ ಮಾತ್ರವಲ್ಲದೆ , ಮೂರ್ತಿ ಸ್ಥಾಪನೆಯಾದ ಬಳಿಕ ವಿಸರ್ಜನೆಯವರೆಗೆ ರಾತ್ರಿಕಾಲದಲ್ಲಿ ಉತ್ಸವ ಸ್ಥಳ ದಲ್ಲಿ ಇರುತ್ತಾರೆ ರಮೇಶ್ ಪೂಜಾರಿಯವರು.  ಕಲೆಯ ಬಗೆಗೆ ಯಾವುದೇ ಹಿನ್ನೆಲೆ ಇಲ್ಲದೆ , ಗಣೇಶ ಮೂರ್ತಿ ರಚನೆಕಾರನಾದುದು ವಿಶೇಷವೇ ಸರಿ.

ಡಾ। ರಾಜೇಶ್ ಬೆಜ್ಜಂಗಳ

The post ಮಣ್ಣಿನಿಂದ ಮೂರ್ತಿಯವರೆಗೂ first appeared on Puttur Ganapathi.

Hello world!
Click here to go home page

The post Hello world! first appeared on Puttur Ganapathi.